ಬೆಳಗಿನಿ೦ದಲೂ ಮಳೆಹನಿಯ ಚಿಟ ಪಟ
ತ೦ತು ನಿನ್ನ ನೆನಪು ಏನಿದು ಈ ಮಾಟ
ಕಾಮನಬಿಲ್ಲು ನೆನಪಿಸುವ ನಿನ್ನ ಕಣ್ಣೋಟ
ನಲ್ಲೆ ಬಾ ಬಳಿಗೆ ಬಿಡು ನಿನ್ನ ತು೦ಟಾಟ
ಬಾನು ಮುಗಿಲು ಒ೦ದಾದ ಈ ನೋಟ
ನೀನಿರಲು ಬಾಳು ನಗುವ ಹೂ ತೋಟ.
ಸುರಿಯುತಿಹ ಮುಸಲಧಾರೆಯ ಆರ್ಭಟ
ಇಳೆ ವರುಣರ ಭರ್ಜರಿ ಪ್ರಣಯದಾಟ !
Created by Mr Manjunath
Wednesday, 21 September 2011
ನಿನ್ನ ನೆನೆದು
ನಿನ್ನ ನೆನೆದು ಹಸಿರಾಯಿತು ನನ್ನ ಮನ,
ಬಂದು ನನ್ನ ಸೇರಿಬಿಡು ಅದು ಒಣಗುವ ಮುನ್ನ,
ಮುಳುಗಿರುವೆ ನಾ ನಿನ್ನ ಪ್ರೀತಿಯಲಿ
ಮುಳುಗಿಸಬೇಡ ನನ್ನ ಪ್ರೀತಿಯನ್ನು ನನ್ನಲ್ಲಿ,
ನಿನಗಾಗಿ ಬರೆದ ಈ ಸಾಲನ್ನ,
ಓದಿ ಬಿಡು ನಾ ಸಾಯುವ ಮುನ್ನ....!
No comments:
Post a Comment