ಕನಸುಗಳು ಥೇಟ್
ಚಿಟ್ಟೆಗಳ೦ತೆ...
ಕಣ್ಣೆದುರೇ
ಕೈಯಳತೆ ದೂರದಲ್ಲೇ
ನಲಿದಾಡುತಾ
ರ೦ಗುರ೦ಗಿನ
ಸೊಬಗು ತೋರುತಾ
ಚಿಟ್ಟೆಗಳ೦ತೆ...
ಕಣ್ಣೆದುರೇ
ಕೈಯಳತೆ ದೂರದಲ್ಲೇ
ನಲಿದಾಡುತಾ
ರ೦ಗುರ೦ಗಿನ
ಸೊಬಗು ತೋರುತಾ
ಇತ್ತ
ಕೈಗೂ ಸಿಗದೆ
ಅತ್ತ
ಮರೆಯೂ ಆಗದೆ
ಒ೦ದಷ್ಟೊತ್ತು
ಕಾಡುತ್ತವೆ..
ನೋಡುನೋಡುತಲೆ
ಮಾರುದೂರ
ಸಾಗಿ
ಕಲ್ಪನೆಯ
ರೆಕ್ಕೆಗಳೊ೦ದಿಗಿನ
ಚುಕ್ಕಿಯಾಗಿ
ಮತ್ತ್ಯಾವುದೊ
ಮೋಹಿತ
ಮನ ಕೆಡಿಸಲು
ಕನಸಿನ
ಕದ ಸರಿಸಲು
ನಡೆದುಬಿಡುತ್ತವೆ...
ನನ್ನ
ನೆನಹನೂ
ನೆನೆಯದೆ
ನಿಷ್ಟೂರವಾಗಿ....!!!
ಕೈಗೂ ಸಿಗದೆ
ಅತ್ತ
ಮರೆಯೂ ಆಗದೆ
ಒ೦ದಷ್ಟೊತ್ತು
ಕಾಡುತ್ತವೆ..
ನೋಡುನೋಡುತಲೆ
ಮಾರುದೂರ
ಸಾಗಿ
ಕಲ್ಪನೆಯ
ರೆಕ್ಕೆಗಳೊ೦ದಿಗಿನ
ಚುಕ್ಕಿಯಾಗಿ
ಮತ್ತ್ಯಾವುದೊ
ಮೋಹಿತ
ಮನ ಕೆಡಿಸಲು
ಕನಸಿನ
ಕದ ಸರಿಸಲು
ನಡೆದುಬಿಡುತ್ತವೆ...
ನನ್ನ
ನೆನಹನೂ
ನೆನೆಯದೆ
ನಿಷ್ಟೂರವಾಗಿ....!!!

No comments:
Post a Comment