ಬರುತಿದೆ ಮಳೆ
ಆನಂದ
ಸುರಿಯುತಿದೆ ಮಳೆ
ಮಹದಾನಂದ
ಬೀಳುತಲಿದೆ ಮಳೆ
ಧಾರೆಯ ತೆರದಿ ?
ಭಯ! ಮೈಯಲ್ಲಿ ನಡುಕ!
ಸುರಿಯುತ್ತಲಿದೆ ಮಳೆ
ಗುಡುಗು ಸಿಡಿಲು ಮಿಂಚು ಸಹಿತ ?
ಹೃದಯ ಬಡಿತವೇರಿ
ಮೈಯಲ್ಲಾ ಬೆವರಿ
ಬೆನ್ನು ಮೂಳೆ ಅದರಿ
ಕಾಲುಗಳಲ್ಲಿಯ ಶಕ್ತಿ ಉಡುಗಿ
ಕೆಳಗೆ ಕುಸಿದಿರುವುದೇ
ಗೊತ್ತಾಗಲಿಲ್ಲ.
Original By-- ಪಾಂಡುರಂಗತನಯ
Posting By Adiga.....
No comments:
Post a Comment